ಮೈಸೂರು ವಿಶ್ವವಿದ್ಯಾನಿಲಯ -
ಕರ್ನಾಟಕದ ರಾಜ್ಯದ ವಿಶ್ವವಿದ್ಯಾಲಯಗಳ ಪೈಕಿ ಒಂದು. ಸ್ಥಾಪನೆ 1916. ಇದರ ಆಡಳಿತ ಕೇಂದ್ರ ಮತ್ತು ಮುಖ್ಯ ಕಾಲೇಜುಗಳು ಮೈಸೂರಿನಲ್ಲಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಈ ಜಿಲ್ಲೆಗಳು ಇದರ ಪ್ರಾದೇಶಿಕ ವ್ಯಾಪ್ತಿಯಲ್ಲಿದೆ.

ಭಾರತದಲ್ಲಿ ಉನ್ನತ ಶಿಕ್ಷಣದ ಪ್ರಾಮುಖ್ಯವನ್ನು ಕುರಿತು ಅಗತ್ಯದ ಸೌಲಭ್ಯ ಒದಗಿಸಿಕೊಟ್ಟ ಆಶ್ರಿತ ಸಂಸ್ಥಾನಗಳಲ್ಲಿ ಮೈಸೂರು (ಹಿಂದಿನ ಮೈಸೂರು ರಾಜ್ಯ) ಮೊದಲನೆಯದು. 1853ರಲ್ಲಿ ಆರಂಭವಾದ ಮೈಸೂರಿನ ಮಹಾರಾಜ ಕಾಲೇಜೂ 1858ರಲ್ಲಿ ಆರಂಭವಾದ ಬೆಂಗಳೂರಿನ ಸೆಂಟ್ರಲ್ ಕಾಲೇಜೂ 20 ನೆಯ ಶತಮಾನದ ಎರಡನೆಯ ದಶಕದ ತನಕವೂ ಮದರಾಸು ವಿಶ್ವವಿದ್ಯಾಲಯದ ಅಂಗೀಕೃತ ಕಾಲೇಜುಗಳಾಗಿದ್ದವು. 1916ರಲ್ಲಿ ಮೈಸೂರು ಸಂಸ್ಥಾನದಲ್ಲೇ ಮೊತ್ತಮೊದಲನೆಯದಾಗಿ ಆರಂಭವಾದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮೇಲಿನ ಎರಡು ಕಾಲೇಜುಗಳೂ ಕೇಂದ್ರಸಂಸ್ಥೆಗಳಾದವು. 1917ರಲ್ಲಿ ಬೆಂಳೂರಿನಲ್ಲಿ ಎಂಜಿನಿಯರಿಂಗ್ ಕಾಲೇಜೂ 1924ರಲ್ಲಿ ಮೆಡಿಕಲ್ ಕಾಲೇಜೂ (ಅನಂತರ ಇದು ಮೈಸೂರಿಗೆ ವರ್ಗವಾಯಿತು) ಆರಂಭವಾದವು. 1959ರ ವೇಳೆಗೆ ಇನ್ನೂ ವಿಶ್ವವಿದ್ಯಾನಿಲಯದ 13 ನೂತನ ಕಾಲೇಜುಗಳು ಆರಂಭವಾದವು. ಜೊತೆಗೆ ಅದು 37 ಖಾಸಗಿ ಕಾಲೇಜುಗಳಿಗೂ ಅಂಗೀಕಾರ ನೀಡಿತು. 1964ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದುದರ ಫಲವಾಗಿ ಆ ನಗರದ 32 ಕಾಲೇಜುಗಳೂ ವಿಶ್ವವಿದ್ಯಾಲಯದ ವ್ಯಾಪ್ತಿಗೆ ವರ್ಗವಾದವು. 1980ರಲ್ಲಿ ಮಂಗಳೂರು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂತು. ಕೇವಲ ಎರಡು ಕಾಲೇಜುಗಳಿಂದ ಆರಂಭವಾದ ಮೈಸೂರು ವಿಶ್ವವಿದ್ಯಾನಿಲಯ 107 ಕಾಲೇಜುಗಳನ್ನು ಹೊಂದಿತ್ತು (1993 - 94). ಕುವೆಂಪು ವಿಶ್ವವಿದ್ಯಾಲಯ (1987) ಸ್ಥಾಪನೆಗೊಂಡಮೇಲೆ ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆ ಮತ್ತು ಹಾಗೂ ಅಲ್ಲಿನ ಕಾಲೇಜುಗಳು ಆ ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಸೇರಿದವು. ಈಗ ಮೈಸೂರು ವಿಶ್ವವಿದ್ಯಾನಿಲಯ 146 ಕಾಲೇಜುಗಳನ್ನು ಹೊಂದಿದೆ (2005). 598 ವಿದ್ಯಾರ್ಥಿಗಳಿಂದ ಆರಂಭವಾದ ವಿಶ್ವವಿದ್ಯಾನಿಲಯ 80 ವರ್ಷಗಳ ಈ ಕಾಲಾವಧಿಯಲ್ಲಿ ಅಗಾಧವಾದ ಅಭಿವೃದ್ಧಿ ಹೊಂದಿ ಈಗ 75,580 ಪ್ರಥಮ ಪದವಿಯ ವಿದ್ಯಾರ್ಥಿಗಳಿಗೂ ಸುಮಾರು 3500 (2005 - 06ರ ಸಾಲಿನಲ್ಲಿದ್ದಂತೆ) ಮಂದಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಶಿಕ್ಷಣವೀಯುತ್ತದೆ. ಬೋಧನೆ ಸಂಶೋಧನೆ, ವಿಸ್ತರಣೆ - ಈ ಮೂರು ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ವ್ಯವಸ್ಥೆಗೊಳಿಸಿಕೊಂಡು ನಿರ್ವಹಿಸುತ್ತ ಭಾರತದ ಖ್ಯಾತಿವೆತ್ತ ವಿಶ್ವವಿದಾನಿಲಯಗಳಲ್ಲಿ ಒಂದು ಎಂಬ ಹೆಸರು ಪಡೆದಿದೆ.

ಈ ವಿಶ್ವವಿದ್ಯಾನಿಲಯದ ಮೂಲಶಾಸನ 1933ರಲ್ಲೂ ಅನಂತರ 1930ರಲ್ಲೂ ತಿದ್ದುಪಡಿಯಾಗಿ ಸೆನೆಟ್ಟಿನ ಸದಸ್ಯತ್ವ ವ್ಯಾಪ್ತಿಯುತವಾದುದರ ಜೊತೆಗೆ ಅಕಾಡೆಮಿಕ್ ಕೌನ್ಸಿಲ್ಲನ್ನು ಆರಂಭಿಸಿ ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ತಾನೇ ರೂಪಿಸಿ ನಡೆಸಿಕೊಂಡು ಬರುವ ಹಕ್ಕು ಪಡೆದುಕೊಂಡಿತು. ಅನಂತರ 1956ರ ಕಾಯಿದೆಯ ಪ್ರಕಾರ ವಿಶ್ವವಿದ್ಯಾನಲಯ ಸ್ವತಂತ್ರ ಸಂಸ್ಥೆಯಾಯಿತು. 1960ರಲ್ಲಿ ಆಗತಾನೆ ಕೊಂಡುಕೊಂಡ ಜಯಲಕ್ಷ್ಮೀ ಮಹಲ್ಲಿಗೆ ಮಹಾರಾಜ ಕಾಲೇಜಿನಲ್ಲಿ ನಡೆಯುತ್ತಿದ್ದ ಸ್ನಾತಕೋತ್ತರ ತರಗತಿಗಳು ವರ್ಗವಾದವು. ವಿಶ್ವವಿದ್ಯಾನಿಲಯದ ಈ ನೂತನ ಬಡಾವಣೆ ಅಂದಿನ ಕುಲಪತಿಗಳಾಗಿದ್ದ ರಾಷ್ಟ್ರಕವಿ ಕೆ. ವಿ. ಪುಟ್ಟಪ್ಪನವರು (ಕುವೆಂಪು) ಮಾನಸಗಂಗೋತ್ರಿ ಎಂದು ನಾಮಕರಣ ಮಾಡಿದರು.

ವಿಶ್ವವಿದ್ಯಾನಿಲಯ ನಡೆಸುತ್ತಿದ್ದ 17 ಕಾಲೇಜುಗಳಲ್ಲಿ 14ನ್ನು 1960ರಲ್ಲಿ ಸರ್ಕಾರಕ್ಕೆ ವರ್ಗಾಯಿಸಲಾಯಿತು. 1964ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಆರಂಭವಾದ್ದರಿಂದ ಸೆಂಟ್ರಲ್ ಕಾಲೇಜು ಅದಕ್ಕೆ ಸೇರಿಹೋಯಿತು. ಆದ್ದರಿಂದ ವಿವಿಧ ವಿe್ಞÁನ ಮತ್ತು ಗಣಿತ ಶಾಸ್ತ್ರಗಳ ಸ್ನಾತಕೋತ್ತರ ತರಗತಿಗಳನ್ನು ಮಾನಸಗಂಗೋತ್ರಿಯಲ್ಲಿ ಹೊಸದಾಗಿ ಆರಂಭಿಸಬೇಕಾಯಿತು. ಸ್ನಾತಕೋತ್ತರ ವಿಭಾಗಗಳ ವ್ಯವಸ್ಥೆ 1960ರಲ್ಲಿ ಆರಂಭವಾಗಿ ಎರಡನೆಯ ಯೋಜನೆಯಲ್ಲಿ ಸ್ವಲ್ಪಮಟ್ಟಿಗೆ ಅಭಿವೃದ್ಧಿ ಸಾಧಿಸಿತು. 
ನೂತನವಾಗಿ ಆಡಳಿತ ವಿಭಾಗ, ಕಟ್ಟಡಗಳ ನಿರ್ಮಾಣ, ಪ್ರಯೋಗಾಲಯಗಳ ಸ್ಥಾಪನೆ, ಉಪಕರಣಾದಿಗಳ ಸರಬರಾಜು, ಅಧ್ಯಾಪಕರ ನೇಮಕ, ವಿದ್ಯಾರ್ಥಿನಿಲಯಗಳ ಆರಂಭ, ಗ್ರಂಥಾಲಯದ ಏರ್ಪಾಡು-ಇವೆಲ್ಲ ಕಾರ್ಯಗಳೂ ಮೂರನೆಯ ಯೋಜನೆಯಲ್ಲಿ ಮುಂದುವರಿದವು. ಸಮಾಜವಿe್ಞÁನ, ಸಂಖ್ಯಾಕಲನ ವಿe್ಞÁನ, ಭೂಗೋಳಶಾಸ್ತ್ರ, ಮುಂತಾದ ವಿಭಾಗಗಳು 1963ರಲ್ಲಿ ಆರಂಭವಾದವು. ಅನಂತರ ಜೈನಶಾಸ್ತ್ರ ಮತ್ತು ಪ್ರಾಕೃತ, ಪತ್ರಿಕೋದ್ಯಮ, ದಕ್ಷಿಣಭಾರತೀಯ ಅಧ್ಯಯನ ಮುಂತಾದ ವಿಭಾಗಗಳು ಅಸ್ತಿತ್ವಕ್ಕೆ ಬಂದುವು. ಈಗ (2005-06) ಮೂವತ್ತೇಳು ವಿಭಾಗಗಳಲ್ಲಿ 55ಕ್ಕೂ ಹೆಚ್ಚಿನ ವಿಷಯ ವಿಭಾಗಗಳಲ್ಲಿ ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆಗೊಂಡಿದೆ.

ಮಂಗಳೂರಿಗೆ 20 ಕಿಮೀ ದೂರದಲ್ಲಿರುವ ಕೊಣಾಜೆಯಲ್ಲಿ ಮಂಗಳ ಗಂಗೋತ್ರಿ ಎಂಬ ಸ್ನಾತಕೋತ್ತರ ಕೇಂದ್ರವನ್ನು ಮೈಸೂರು ವಿಶ್ವವಿದ್ಯಾನಿಲಯ 1968ರಲ್ಲಿ ಆರಂಭಿಸಿತು. ಅಲ್ಲಿ ಕನ್ನಡ ಮತ್ತು ಭೌತವಿe್ಞÁನ ವಿಭಾಗಗಳು ಆ ವರ್ಷ ಆರಂಭವಾದವು. ಅನಂತರ 1970ರಲ್ಲಿ ಜೀವವಿe್ಞÁನ ವಿಭಾಗವೂ 1971ರಲ್ಲಿ ವಾಣಿಜ್ಯಶಾಸ್ತ್ರ ವಿಭಾಗವೂ ಆರಂಭವಾದವು. ಈತ ಅದು ಸ್ವತಂತ್ರವಾದ ವಿಶ್ವವಿದ್ಯಾಲಯವಾಗಿ ರೂಪುಗೊಂಡಿದೆ (1980). 1973-74ರಲ್ಲಿ ಶಿವಮೊಗ್ಗದ ಬಳಿ ಒಂದು ಸ್ನಾತಕೋತ್ತರ ಕೇಂದ್ರವನ್ನು (ಭದ್ರಾ ಪ್ರಾಜೆಕ್ಟ್) ಆರಂಭಿಸಿತು. ಮೊದಲ ವರ್ಷ ಕನ್ನಡ, ರಸಾಯನವಿe್ಞÁನಗಳ ಶಿಕ್ಷಣ ಏರ್ಪಟ್ಟಿತು. ಹಾಗೆಯೇ ದಾವಣಗೆರೆಯಲ್ಲಿ ಸ್ನಾತಕೋತ್ತರ ಕೇಂದ್ರ ತೆರೆದು ಅರ್ಥಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರಗಳ ಶಿಕ್ಷಣ ನೀಡುತ್ತಿತ್ತು. ಈಗ ಕುವೆಂಪು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದೆ.

ಪ್ರತಿಯೊಂದು ಸ್ನಾತಕೊತ್ತರ ವಿಷಯ ವಿಭಾಗವೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಿದೆ. ಕನ್ನಡ ವಿಭಾಗ ಕನ್ನಡ ಅಧ್ಯಯನ ಸಂಸ್ಥೆಯಾಗಿ (1968) ಅನಂತರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಾಗಿ (1994) ವ್ಯವಸ್ಥೆಗೊಂಡು ಮಾಡ್ಟರ್ ಆಫ್ ಆಟ್ರ್ಸ್ ತರಗತಿಯ ಜೊತೆಗೆ ಇತರ ತರಗತಿಗಳನ್ನೂ ಕಾರ್ಯಕ್ರಮಗಳನ್ನೂ ವ್ಯವಸ್ಥೆಗೊಳಿಸಿಕೊಂಡಿದೆ. ಹಿಂದೆ ಪ್ರಾಚ್ಯ ಸಂಶೋಧನ ಸಂಸ್ಥೆಗೆ ಸೇರಿದ್ದ ಕನ್ನಡ ವಿಭಾಗ ಈಗ ಸಂಸ್ಥೆಗೆ ವರ್ಗವಾಗಿ ಅದರ ನೇತೃತ್ವದಲ್ಲಿ ಕೆಲಸಮಾಡುತ್ತಿದೆ. ಜಾನಪದ ವಿಭಾಗ, ಭಾಷಾಂತರ ವಿಭಾಗ, ಪಠ್ಯ ಮತ್ತುಗ್ರಂಥ ಪ್ರಕಟಣೆಯ ವಿಭಾಗ ಇವೂ ಇದರ ಶಾಖೆಗಳಾಗಿ ಏರ್ಪಟ್ಟಿವೆ. ದಕ್ಷಿಣ ಭಾರತೀಯ ಅಧ್ಯಯನದಲ್ಲಿ ಮಾಸ್ಟರ್ ಆಫ್ ಆಟ್ರ್ಸ್ (ಎಂ.ಎ) ತರಗತಿಯೂ ಭಾಷಾಂತರ ವಿಷಯಕ್ಕೆ ಸಂಬಂಧಿಸಿದಂತೆ ಡಿಪ್ಲೋಮಾ ಮತ್ತು ಮಾಸ್ಟರ್ ಆಫ್ ಫಿಲಾಸಫಿ (ಎಂ.ಫಿಲ್) ತರಗತಿಗಳೂ ವ್ಯವಸ್ಥೆಗೊಂಡಿವೆ. ಸರ್ಕಾರ ಪ್ರಕಟಿಸಲು ಉದ್ಧೇಶಿಸಿದ್ದ 14 ಸಂಪುಗಳ ಕನ್ನಡ ವಿಶ್ವಕೋಶದ ಪ್ರಕಟಣೆಯ ಕಾರ್ಯವನ್ನೂ ಜೊತೆಗೆ 30 ಸಂಪುಟಗಳಲ್ಲಿ ವಿಷಯ ವಿಶ್ವಕೋಶಗಳನ್ನು ಪ್ರಕಟಿಸುವ ಯೋಜನೆಯನ್ನು ಸಂಸ್ಥೆ ನಿರ್ವಹಿಸುತ್ತಿದ್ದು ಈಗಾಗಲೆ ಕನ್ನಡ ವಿಶ್ವಕೋಶದ ಹನ್ನೆರಡು ಸಂಪುಗಳು (1986), ವಿಷಯ ವಿಶ್ವಕೋಶದ ಮೊದಲ ಸಂಪುಟವೂ (ಕರ್ನಾಟಕ) ಪ್ರಕಟವಾಗಿವೆ. ಎಪಿಗ್ರಾಫಿಯ ಕರ್ನಾಟಕ ಸಂಪುಟಗಳ ಪರಿಷ್ಕರಣ ಮತ್ತು ಮರು ಮುದ್ರಣ ಕಾರ್ಯವೂ ಸಂಸ್ಥೆಯ ನೇತೃತ್ವದಲ್ಲಿ ನಡೆಯುತ್ತಿದೆ. ಈಗಾಗಲೇ ಈ ಪ್ರಕಟಣೆಯ 10 ಸಂಪುಗಳು ಹೊರಬಂದಿದ್ದು ಉಳಿದಸಂಪುಟಗಳು ಸಿದ್ಧವಾಗುತ್ತಿವೆ. ಸಂಸ್ಥೆಯ ಇದುವರೆಗೆ (1990 ಜುಲೈ) 523 ಗ್ರಂಥಗಳನ್ನು ಪ್ರಕಟಿಸಿದೆ. ಇದರಲ್ಲಿ ಪಠ್ಯ ವಿಭಾಗದ ಗ್ರಂಥಗಳು 231. ಇವುಗಳಲ್ಲಿ ಪದವಿ ಮಟ್ಟದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಬೇಕಾಗುವ ವಿವಿಧ ವಿಷಯಗಳನ್ನು ಕುರಿತ ಪಠ್ಯಪುಸ್ತಕಗಳೂ ಪರಾಮರ್ಶನ ಗ್ರಂಥಗಳೂ ಸೇರಿವೆ. ಇಂಗ್ಲೀಷ್ ವಿಭಾಗ ಒಂದು ವರ್ಷದ ಇಂಗ್ಲೀಷ್ ಡಿಪ್ಲೋಮಾ ತರಗತಿಯನ್ನೂ ವಿದೇಶೀ ಭಾಷಾಧ್ಯಯನದ ಡಿಪ್ಲೋಮಾ ತರಗತಿಗಳನ್ನೂ ಇತಿಹಾಸ ವಿಭಾಗ ಮಧ್ಯ ಏಷ್ಯ ಅಧ್ಯಯನದಲ್ಲಿ ಡಿಪ್ಲೋಮಾ ಮತ್ತು ಎಂ.ಎ ತರಗತಿಗಳನ್ನೂ ಭೂಗೋಳ ಶಾಸ್ತ್ರದ ವಿಭಾಗದಲ್ಲಿ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಪ್ರಾದೇಶಿಕ ಯೋಜನೆ ಎರಡು ವರ್ಷಗಳ ಎಂ.ಎ ಮತ್ತು ಪಿಎಚ್. ಡಿ. ತರಗತಿಗಳನ್ನೂ ಯೋಜನೆ ಮತ್ತು ಅಭಿವೃದ್ಧಿಕಾರ್ಯಗಳಿಗೆ ಸಂಬಂಧಿಸಿದ ಅಲ್ಪಾವಧಿ ತರಗತಿಗಳನ್ನೂ ಏರ್ಪಡಿಸಲಾಗಿತ್ತು. ಆದರೆ ಈಗ ಈ ವಿಭಾಗ ಅಭಿವೃದ್ಧಿ ಅಧ್ಯಯನ ಎಂಬ ಹೆಸರಿನಲ್ಲಿ ಪ್ರತ್ಯೇಕವಾಗಿ ರೂಪುಗೊಂಡಿದ್ದು ಹಲವು ಹೊಸ ಕಾರ್ಯಕ್ರಮಗಳನ್ನೂ ಕೈಗೊಂಡಿದೆ. ಭೂವಿe್ಞÁನ ವಿಭಾಗ ಖನಿಜ ವಿe್ಞÁನ ಸಂಸ್ಥೆಯನ್ನು ಆರಂಭಿಸಿದೆ. ವಾಣಿಜ್ಯ ಶಾಸ್ತ್ರ ವಿಭಾಗ ಎರಡು ವರ್ಷದ ಮಾಸ್ಟರ್ ಆಫ್ ಕಾಮರ್ಸ್ (ಎಂ.ಕಾಂ) ಜೊತೆಗೆ ಸಾಮಾನ್ಯ ಪ್ರಥಮ ಪದವಿ ಪಡೆದವರಿಗೂ ಅವಕಾಶವುಳ್ಳ ವ್ಯವಹಾರೋದ್ಯಮಗಳ ಆಡಳಿತದಲ್ಲಿ ಎಂ.ಎ. ತರಗತಿಯನ್ನೂ ನಡೆಸುತ್ತಿದೆ. ಸಂಗೀತ, ನ್ಯಾಯಶಾಸ್ತ್ರ, ಎಂಜಿನಿಯರಿಂಗ್ ವಿಷಯಗಳಲ್ಲೂ ಸ್ನಾತಕೋತ್ತರ ತರಗತಿಗಳ ವ್ಯವಸ್ತೆಯಾಗಿದೆ. ಗ್ರಂಥಾಲಯ ವಿe್ಞÁನದಲ್ಲೂ ದೈಹಿಕ ಶಿಕ್ಷಣದಲ್ಲೂ ಸ್ನಾತಕೋತ್ತರ ಶಿಕ್ಷಣ ಏರ್ಪಟ್ಟಿದೆ. ಶೋಧನೆ, ಸಂಶೋಧನೆ, ವಿಸ್ತರಣೆ - ಈ ಮೂರು ಕರ್ತವ್ಯಗಳೂ ಸಮಾನ ಪ್ರಾಮುಖ್ಯದವೆಂದು ಧೃಡವಾಗಿ ನಂಬಿರುವ ವಿಶ್ವವಿದ್ಯಾನಿಲಯ ಎಲ್ಲ ವಿಷಯ ವಿಭಾಗಗಳಲ್ಲೂ ಸಂಶೋಧನ ವಿದ್ಯಾರ್ಥಿ ವೇತನಗಳಿಗೆ ಅವಕಾಶ ಕಲ್ಪಿಸಿರುವುದಲ್ಲದೆ ಮಾನವಿಕ ಮತ್ತು ವಿe್ಞÁನ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಲು ಎರಡು ಪ್ರತ್ಯೇಕ ಸಂಶೋಧನೆ ಪತ್ರಿಕೆಗಳನ್ನು ಪ್ರಕಟಿಸುತ್ತಿದೆ. 

ವಿಸ್ತರಣೆ ಸೇವೆ : ವಿಶ್ವವಿದ್ಯಾನಿಲಯದಲ್ಲಿ ಕ್ರಮವಾದ ವಿದ್ಯಾರ್ಥಿಗಳಾಗಿ ಸೇರಿ ಶಿಕ್ಷಣ ಪಡೆಯಲಾಗದಿದ್ದವರ ಉಪಯೋಗಕ್ಕಾಗಿ ವ್ಯಾಪಕವಾದ ವಿಸ್ತರಣ ಸೇವಾ ವ್ಯವಸ್ಥೆ ಏರ್ಪಟ್ಟಿದೆ. ಸುಮಾರು 40 ವರ್ಷಗಳ ಹಿಂದಿನಿಂದಲೂ ತನ್ನ ಪ್ರಾದೇಶಿಕ ವ್ಯಾಪ್ತಿಯಲ್ಲಿ ಬೇರೆ ಬೇರೆ ಊರುಗಳಲ್ಲಿ ವಿವಿಧ ವಿಷಯಗಳನ್ನು ಕುರಿತು ವಿದ್ವಾಂಸರಿಂದ ಪ್ರಚಾರೋಪನ್ಯಾಸಗಳನ್ನು ಏರ್ಪಡಿಸುವ ಕಾರ್ಯವೂ ಆ ಉಪನ್ಯಾಸಗಳ ವಿಷಯವನ್ನು ಕಿರುಹೊತ್ತಿಗೆಗಳಿಗಾಗಿ ಪ್ರಕಟಿಸುವ ಕಾರ್ಯವೂ ನಡೆಯುತ್ತಿದ್ದು ಅವೆರಡು ಕಾರ್ಯಗಳೂ ತುಂಬ ಜನಪ್ರಿಯವೆನಿಸಿದೆ. ಇವುಗಳ ಜೊತೆಗೆ ವಿಶೇಷ ಉಪನ್ಯಾಸಗಳೂ ಉಪನ್ಯಾಸಮಾಲೆಗಳೂ ಏರ್ಪಡುತ್ತಿವೆ. ಪುಟ್ಟಣ್ಣ ಚೆಟ್ಟೆ ಪುದುವೆಟ್ಟಿನಮಾಲೆ, ಗೃಹಸರಸ್ವತಿ ಗ್ರಂಥಮಾಲೆ, ವಿಶೇಷೋಪನ್ಯಾಸ ಮಾಲೆ, ಕನ್ನಡ ಗ್ರಂಥಮಾಲೆ, ಪಠ್ಯಪುಸ್ತಕ ಮಾಲೆ ಮುಂತಾದ ಶೀಷಿಕೆಗಳಲ್ಲಿ ಅನೇಕ ಉಪಯುಕ್ತ ಗ್ರಂಥಗಳು ಇಂಗ್ಲೀಷಿನಲ್ಲೂ ಕನ್ನಡದಲ್ಲೂ ಪ್ರಕಟವಾಗಿವೆ. ಇವುಗಳ ಜೊತೆಗೆ ಪ್ರಬುದ್ಧ ಕರ್ಣಾಟಕ, ಮಾನವಿಕ ಕರ್ಣಾಟಕ, ವಿe್ಞÁನ ಕರ್ಣಾಟಕ ಎಂಬ ಮೂರು ತ್ರೈಮಾಸಿಕ ಕನ್ನಡ ಪತ್ರಿಕೆಗಳೂ ಪ್ರಕಟವಾಗುತ್ತಿವೆ. ಜೊತೆಗೆ ಇಲ್ಲಿಯ ತನಕ ಪ್ರಕಟವಾದ ಮತ್ತು ಪ್ರಕಟವಾಗುತ್ತಿರುವ ಕನ್ನಡ ಪುಸ್ತಕಗಳ ವಿವರಣಾತ್ಮಕ ಗ್ರಂಥಸೂಚಿಯನ್ನು ಹಲವಾರು ಸಂಪುಟಗಳಲ್ಲಿ ಪ್ರಕಟಿಸುತ್ತಿದೆ. 1969 ರ ನವೆಂಬರ್‍ನಲ್ಲಿ ಇಡೀ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಎನಿಸಿದ ಅಂಚೆ ಮತ್ತು ತೆರಪಿನ ಶಿಕ್ಷಣ ಏರ್ಪಟ್ಟು ಪ್ರತಿವರ್ಷ ಸಹಸ್ರಾರು ವಿದ್ಯಾರ್ಥಿಗಳು ಆ ಸೌಲಭ್ಯವನ್ನು ಬಳಸಿಕೊಳ್ಳೂತ್ತಿದ್ದಾರೆ. ಕಲೆ ಮತ್ತು ವಾಣಿಜ್ಯದ ವಿವಿಧ ವಿಷಯ ವಿಭಾಗಗಳಲ್ಲಿ ಪದವಿ ಮಟ್ಟದಲ್ಲೂ ಕನ್ನಡ, ಸಂಸ್ಕøತ, ಇಂಗ್ಲಿಷ್, ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಹಿಂದಿ, ಉರ್ದು ಈ ವಿಷಯಗಳಲ್ಲಿ ಸ್ನಾತಕೋತ್ತರ ಮಟ್ಟದಲ್ಲೂ ಶಿಕ್ಷಣ ಸೌಲಭ್ಯ ಏರ್ಪಟ್ಟು ಇತರ ವಿಷಯಗಳಿಗೂ ಕ್ರಮ ಕ್ರಮವಾಗಿ ವಿಸ್ತರಿಸುವ ಕಾರ್ಯಕ್ರಮ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಗಿದೆ. ಪದವಿಯೋತ್ತರ ಇಂಗ್ಲಿಷ್ ಡಿಪ್ಲೋಮ ಹಾಗೂ ಪಿಯುಸಿ ಅನಂತರದ ಕನ್ನಡ ಡಿಪ್ಲೋಮ ವಿಷಯಗಳಿಗೆ ಶಿಕ್ಷಣ ನೀಡುತ್ತಿದೆ. ಅಲ್ಲದೆ ಈ ಸಂಸ್ಥೆ ಕೆಲವು ಪ್ರಥಮಗಳನ್ನು ಸಾಧಿಸಿದೆ. ಪ್ರಥಮ ಬಾರಿಗೆ ಬಿ.ಎಡ್. ಪದವಿ ತರಗತಿ ಆರಂಭಿಸಿದುದು. ಮೊದಲ ಬಾರಿಗೆ ಅಂಚೆ ಶಿಕ್ಷಣದ ಮೂಲಕ ಕಾನೂನು ಶಿಕ್ಷಣ ನೀಡಲು ಬಿ.ಜಿ.ಎಲ್. ತರಗತಿಗಳನ್ನು ಆರಂಭಿಸಿದುದು, ಪತ್ರಿಕೋದ್ಯಮಿಗಳಿಗೆ ಪ್ರಾರಂಭಿಕ ಶಿಕ್ಷಣ ನೀಡಲು ಪತ್ರಿಕೋದ್ಯಮದಲ್ಲಿ ಸರ್ಟಿಫಿಕೇಟ್ ಶಿಕ್ಷಣ ನೀಡಲು ಆರಂಭಿಸಿದರು. ಕನ್ನಡ ಮಾತೃಭಾಷೆ ಅಲ್ಲದವರಿಗೆ ಕನ್ನಡ ಭಾಷಾ ಶಿಕ್ಷಣ ನೀಡಲು ಕನ್ನಡ ಸರ್ಟಿಫಿಕೇಟ್ ತರಗತಿಗಳನ್ನು ಆರಂಭಿಸಿ ಈ ಶಿಕ್ಷಣವನ್ನು ಇಂಗ್ಲಿಷ್, ಹಿಂದಿ ಮತ್ತು ಉರ್ದು ಮಾಧ್ಯಮಗಳ ಮೂಲಕ ಸೇರಿದುದಾಗಿದೆ. ಈ ಸಂಸ್ಥೆ 1996ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟು, ಮೈಸೂರು ವಿಶ್ವವಿದ್ಯಾನಿಲಯದಿಂದ ಬೇರ್ಪಟ್ಟಿದೆ. ಈ ಸೌಲಭ್ಯದ ಜೊತೆಗೆ ಸಂಜೆಯ ವೇಳೆಗೆ ಬಂದು ಶಿಕ್ಷಣ ಪಡೆಯಲು ಆಶಿಸತಕ್ಕವರಿಗಾಗಿ ಸಂಜೆಯ ಕಾಲೇಜನ್ನು ಆರಂಭಿಸಿದೆ.

ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳಿಗೂ ಗ್ರಂಥ ಪ್ರಕಟಣೆಗಳಿಗೂ ಸಹಾಯವಾಗುವಂತೆ ವಿಶ್ವವಿದ್ಯಾನಿಲಯ ತನ್ನದೇ ಆದ ಮುದ್ರಣಾಲಯವನ್ನು ಹೊಂದಿದ್ದು ಅತ್ಯಾಧುನಿಕ ಯಂತ್ರೋಪಕರಣಗಳಿಂದ ಸಜ್ಜುಗೊಂಡಿದೆ. ಈ ಮುದ್ರಣಾಲಯ ಮುದ್ರಣ ಕಲೆಯಲ್ಲಿ ಡಿಪ್ಲೋಮಾ ತರಗತಿಯನ್ನೂ ನಡೆಸುತ್ತಿದೆ. ಇದೇ ವಿಭಾಗದಲ್ಲಿ ಲೇಖನ ಸಾಮಗ್ರಿ ಡಿಪೋ ಒಂದನ್ನು ಅಳವಡಿಸಲಾಗಿದೆ.

 ಹಿಂದೆ ಮಹಾರಾಜ ಕಾಲೇಜಿನ ಆವರಣದಲ್ಲಿದ್ದ ವಿಶ್ವವಿದ್ಯಾನಿಲಯದ ಗ್ರಂಥಾಲಯವನ್ನು ಮಾನಸಗಂಗೋತ್ರಿಯಲ್ಲಿ ನಿರ್ಮಾಣವಾಗಿರುವ ನೂತನವೂ ವಿಶಾಲವೂ ಆದ ಭವ್ಯಮಂದಿರಕ್ಕೆ ವರ್ಗಾಯಿಸಿದೆ. ವಿವಿಧ e್ಞÁನಕ್ಷೇತ್ರಗಳಿಗೆ ಸಂಬಂಧಿಸಿದ ಗ್ರಂಥಗಳನ್ನು ಸಂಗ್ರಹಿಸಿ, ವರ್ಗೀಕರಿಸಿ ವಿದ್ಯಾರ್ಥಿಗಳಿಗೂ ಸಂಶೋಧಕರಿಗೂ ಅನುಕೂಲಪಡಿಸಿದೆ. ಅಮೂಲ್ಯ ಗ್ರಂಥಗಳೂ ಪರಾಮರ್ಶನ ಕೃತಿಗಳೂ ಸಂಶೋಧನ ಪತ್ರಿಕೆಗಳೂ ಇಲ್ಲಿ ದೊರೆಯುವುದಲ್ಲದೆ ಸೂಕ್ಷ್ಮ ಛಾಯಾಗ್ರಹಣ ಸೇವೆಯ ಸೌಲಭ್ಯವೂ ವ್ಯವಸ್ಥೆಗೊಂಡಿದೆ. ಗ್ರಂಥಾಲಯ ವಿಭಾಗ ಗ್ರಂಥಾಲಯ ಮತ್ತು ಮಾಹಿತಿ ವಿe್ಞÁನದಲ್ಲಿ ಪದವಿ ಮತ್ತು ಸ್ನಾತಕೋತ್ತರ ನಿಲಯದ ಜೊತೆಗೆ ಮಾನಸಗಂಗೋತ್ರಿಯಲ್ಲಿ ಮಹಿಳೆಯರಿಗೂ ಪುರಷರಿಗೂ ಪ್ರತ್ಯೇಕ ವಿದ್ಯಾರ್ಥಿನಿಲಯಗಳನ್ನು ನಡೆಸುತ್ತಿದೆ.

ಅನೇಕ ಉಪಯುಕ್ತ ಪ್ರಕಟಣೆಗಳನ್ನು ಹೊರಡಿಸಿರುವ ಹಾಗೂ ಸಂಶೋಧನೆ ಮತ್ತು ಗ್ರಂಥ ಸಂಪಾದನೆಗೆ ಮೀಸಲಾಗಿದ್ದ ಪ್ರಾಚ್ಯಸಂಶೋಧನಾಲಯ ಸಂಸ್ಕøತ ಮತ್ತು ಅರೆಬಿಕ್ ವಿಭಾಗ ಸಂಸ್ಕøತ ಸ್ನಾತಕೋತ್ತರ ವಿಭಾಗದ ನೇತೃತ್ವದಲ್ಲೂ ಕನ್ನಡ ವಿಭಾಗ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಸ್ರಾರು ಅಮೂಲ್ಯ ತಾಳೆಗರಿ ಗ್ರಂಥಗಳು ಸಂಗ್ರಹವಾಗಿವೆ.
ಮೈಸೂರು ವಿಶ್ವವಿದ್ಯಾನಮಿಲಯ ಡಾಕ್ಟರ್ ಆಫ್ ಲಿಟರೇಚರ್ (ಡಿ. ಲಿಟ್), ಡಾಕ್ಟರ್ ಆಫ್ ಸೈನ್ಸ್ (ಡಿ. ಎಸ್ ಸಿ.), ಡಾಕ್ಟರ್ ಆಫ್ ಎಜುಕೇಷನ್ (ಡಿ. ಇಡಿ), ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್. ಡಿ) ಪದವಿಗಳನ್ನೂ ಮಾಸ್ಟರ್ ಆಫ್ ಸೈನ್ಸ್ (ಎಂ. ಎಸ್ಸಿ.), ಮಾಸ್ಟರ್ ಆಫ್ ಆಟ್ರ್ಸ್ (ಎಂ. ಎ), ಮಾಸ್ಟರ್ ಆಫ್ ಎಜುಕೇಷನ್ (ಎಂ. ಇಡಿ.), ಮಾಸ್ಟರ್ ಆಫ್ ಮ್ಯೂಸಿಕ್ (ಎಂ. ಮ್ಯೂಸಿಕ್.), ಮಾಸ್ಟರ್ ಆಫ್ ಲಾ (ಎಂ. ಎಲ್.), ಮಾಸ್ಟರ್ ಆಫ್ ಎಂಜಿನಿಯರಿಂಗ್ (ಎಂ. ಇ), ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ (ಎಂ. ಲಿಬ್), ಮಾಸ್ಟರ್ ಆಫ್ ಫಿಲಾಸಫಿ (ಎಂ. ಫಿಲ್.), ಸ್ನಾತಕೋತ್ತರ ಪದವಿಗಳನ್ನೂ ಬ್ಯಾಚುಲರ್ ಆಫ್ ಆಟ್ರ್ಸ್ (ಬಿ. ಎ.), ಬ್ಯಾಚುಲರ್ ಆಫ್ ಸೈನ್ಸ್ (ಬಿ. ಎಸ್ಸಿ), ಬ್ಯಾಚುಲರ್ ಆಫ್ ಲೈಬ್ರರಿ ಸೈನ್ಸ್ [ಬಿ. ಎಸ್ಸಿ. (ಲಿಬ್)], ಬ್ಯಾಚುಲರ್ ಆಫ್ ಮ್ಯೂಸಿಕ್ (ಬಿ. ಮ್ಯೂಸಿಕ್), ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (ಬಿ. ಇ), ಬ್ಯಾಚುಲರ್ ಆಫ್ ಮೆಡಿಸನ್, ಬ್ಯಾಚುಲರ್ ಆಫ್ ಸರ್ಜರಿ (ಎಂ. ಬಿ. ಬಿ. ಎಸ್) ಮುಂತಾದ ಸಾಮಾನ್ಯ ಪದವಿಗಳನ್ನೂ ಫಾರ್ಮಸಿ, ವಿದೇಶೀ ಭಾಷೆ, ಮುದ್ರಣ, ಭಾಷಂತರ, ಪತ್ರಿಕೋದ್ಯಮ, ಗ್ರಂಥಾಲಯ ವಿe್ಞÁನ ಮುಂತಾದ ವಿಷಯಗಳಲ್ಲಿ ಡಿಪ್ಲೋಮಾಗಳನ್ನೂ ನೀಡುತ್ತಿದೆ.

ಮುಕ್ತ ವಿಶ್ವವಿದ್ಯಾನಿಲಯದ ಸೌಲಭ್ಯ : ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯ ನೇತೃತ್ವದಲ್ಲಿ ಈಚೆಗೆ ಆರಂಭವಾಗಿರುವ ಮುಕ್ತ ವಿಶ್ವವಿದ್ಯಾನಿಲಯದ ಯೋಜನೆಯಲ್ಲಿ ಯಾವ ಸಾಂಪ್ರದಾಯಿಕ ಶಿಕ್ಷಣವನ್ನೂ ಪಡೆದಿರುವ, ಆದರೆ ಸ್ವತಂತ್ರವಾಗಿ ಅಧ್ಯಯನ ನಡೆಸಿ ಪಾಂಡಿತ್ಯ ಗಳಿಸಿಕೊಂಡಿರುವ ಜನತೆಗೆ ಪದವೀಧರರಾಗುವ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. 25 ವರ್ಷ ವಯಸ್ಸಿಗೆ ಕಡಿಮೆ ಇಲ್ಲದವರು ಪದವಿ ತರಗತಿಗಳಿಗೂ 35 ವರ್ಷ ವಯಸ್ಸಿಗೆ ಕಡಿಮೆ ಇಲ್ಲದವರು ಸ್ನಾತಕೋತ್ತರ ಪದವಿ ತರಗತಿಗಳಿಗೂ ಕುಳಿತು ಶಿಕ್ಷಣ ಪಡೆದು ಪದವೀಧರರಾಗಬಹುದು. ಭಾರತದಲ್ಲಿ ಈ ಸೌಲಭ್ಯ ಪ್ರಪ್ರಥಮವಾಗಿ ಕಲ್ಪಿಸಿಕೊಟ್ಟ ಕೀರ್ತಿ ಮೈಸೂರು ವಿಶ್ವವಿದ್ಯಾನಿಲಯದ್ದು.

ಭಾರತ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಯು. ಜಿ. ಸಿ ದೇಶಾದ್ಯಂತರ 1986ರಲ್ಲಿ 48 ಶೈಕ್ಷಣಿಕ ಸಿಬ್ಬಂದಿ ಕಾಲೇಜುಗಳನ್ನು ಸ್ಥಾಪಿಸಿತು. 1988ರಲ್ಲಿ ಶೈಕ್ಷಣಿಕ ಸಿಬ್ಬಂದಿ ಕಾಲೇಜನ್ನು ಸ್ಥಾಪಿಸಲು ಮೈಸೂರು ವಿಶ್ವವಿದ್ಯಾನಿಲಯವನ್ನು ಆಯ್ಕೆಮಾಡಿತು. ಈ ಕಾಲೇಜಿನಲ್ಲಿ ಅಧ್ಯಾಪಕರಿಗೆ ಓರಿಯೆಂಟೇಷನ್ ಮತ್ತು ಪುನರ್‍ನವೀಕರಣ ಕಾರ್ಯಕ್ರಮ ನಡೆಸಲಾಗುತ್ತಿದೆ.
1992-93ರಲ್ಲಿ ಮಂಡ್ಯ ಮತ್ತು ಹಾಸನಗಳಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ಮಂಡ್ಯದಲ್ಲಿ ಸಕ್ಕರೆ ತಂತ್ರe್ಞÁನ ಮತ್ತು ಪಾಲಿಮರ್ ವಿe್ಞÁನ, ಹಾಸನದಲ್ಲಿ ಅಂತರಿಕ್ಷ ತಂತ್ರe್ಞÁನ ಮತ್ತು ಎಲೆಕ್ಟ್ರಾನ್ ವಿಷಯಗಳನ್ನು ವಿಶೇಷವಾಗಿ ಸೇರಿಸಲಾಗಿದೆ.

ವಜ್ರಮಹೋತ್ಸವ : ಅರುವತ್ತು ವರ್ಷಗಳ ಫಲಪ್ರದ ಸೇವೆಯನ್ನು ಸಲ್ಲಿಸಿ ಭಾರತದ ಖ್ಯಾತ ವಿದ್ಯಾಸಂಸ್ಥೆಯೆಂದು ಹೆಸರುಗೊಂಡಿರುವ ಮೈಸೂರು ವಿಶ್ವವಿದ್ಯಾನಿಲಯ 1976ರಲ್ಲಿ ತನ್ನ ವಜ್ರಮಹೋತ್ಸವವನ್ನು ಆಚರಿಸಿತು. 1992ರಲ್ಲಿ ಅಮೃತ ಮಹೋತ್ಸವ ಆಚರಿಸಿದ ಹೆಗ್ಗಳಿಕೆ ಈ ವಿಶ್ವವಿದ್ಯಾನಿಲಯದ್ದು. ಇಲ್ಲಿಯತನಕ ಈ ವಿಶ್ವವಿದ್ಯಾನಿಲಯದಿಂದ ಹೊರಬಂದ ಲಕ್ಷಾಂತರ ಸಂಖ್ಯೆಯ ಸ್ನಾತಕ ಪೂರ್ವ ಪಧವೀದರರೂ ಸಹಸ್ರಾರು ಸಂಖ್ಯೆಯ ಸ್ನಾತಕೋತ್ತರ ಪದವೀಧರರೂ ರಾಷ್ಟ್ರದ ಹಾಗೂ ಪ್ರಪಂಚದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿ ತಮ್ಮ ವಿದ್ಯಾಪೀಠ, ಕೀರ್ತಿ ಪ್ರತಿಷ್ಠೆಗಳನ್ನು ಎತ್ತಿಹಿಡಿದ್ದಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಆರಂಭದಿಂದಲೂ ಖ್ಯಾತ ವಿದ್ವನ್ಮಣಿಗಳು ಇದರ ಕುಲಪತಿ ಪೀಠವನ್ನು ಅಲಂಕರಿಸಿ ವಿಶ್ವವಿದ್ಯಾನಿಲಯದ ಕೀರ್ತಿ ಪ್ರತಿಜ್ಞೆಗಳಿಗೆ ಕಾರಣರಾಗಿದ್ದಾರೆ. ಎಚ್. ವಿ. ನಂಜುಂಡಯ್ಯ (1916-20), ಬ್ರಜೇಂದ್ರನಾಥ್ ಸೀಲ್ (1921-29), ಇ. ಸಿ. ಮೆಟ್‍ಕಾಫ್ (1930-37), ಎನ್, ಎಸ್, ಸುಬ್ಬರಾವ್ 1937-42), ಇ. ಜಿ. ಮೆಕಲ್ ಪೈನ್ (1942-44) ಟಿ. ಸಿಂಗಾರವೇಲು ಮೊದಲಿಯಾರ್ (1944-46) ಎಮ್. ಸುಲ್ತಾನ ಮೊಹಿಯುದ್ದೀನ್ (1946-48), ಬಿ. ಎಲ್, ಮಂಜುನಾಥ್ (1950-55) , ವಿ. ಎಲ್. ಡಿಸೌಜಾ (1960-62), ಕೆ. ಎಮ್. ಪಣಿಕ್ಕರ್ (1963-64), ಕೆ. ಎಲ್. ಶ್ರೀಮಾಲಿ (1964-69), ದೇ. ಜವರೇಗೌಡ (1969-75), ಡಿ. ವಿ. ಅರಸ್ (1975-79), ಕೆ. ಎಸ್. ಹೆಗಡೆ (1979-85), ವೈ. ಪಿ, ರುದ್ರಪ್ಪ (1985-88), ಪಿ, ಸೆಲ್ವಿದಾಸ್ (1988-91), ಎಂ. ಮಾದಯ್ಯ (1991-97). (1998) ಎಸ್. ಎನ್. ಹೆಗಡೆ (1999-2004). ಈಗಿನ ಕುಲಪತಿ ಪ್ರೊ. ಜೆ. ಶಶಿಧರಪ್ರಸಾದ್.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ